ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಶಿಕ್ಷಣಲೋಕ🖊ರಾಜ್ಯಕ್ಕೆ ಪರಿಕ್ಷಯಲ್ಲಿ 8th RANK ಮಲೆನಾಡಿಗೆ ಕಿರ್ತಿ ತಂದುಕೊಟ್ಟ”ದೀಶಾ”..

On: April 14, 2026 11:53 AM
Follow Us:
---Advertisement---

 

ರಿಪ್ಪನ್ ಪೇಟೆ ವರದಿ;- ವರದಿಗಾರರು ಗಣೇಶ್ ರವರ.ಶಿಕ್ಷಣ ಕ್ಷೇತ್ರದ ಸಾಧನೆ ವಿಧ್ಯಾರ್ಥಿಯ ಹೆಗ್ಗಳಿಕೆಯ ವರದಿ🖊

ಪಿಯುಸಿ ಫಲಿತಾಂಶ.ರಿಪ್ಪ ನ್ ಪೇಟೆಯ “ದಿಶಾ”ಗೆ ರಾಜ್ಯಮಟ್ಟ ದಲ್ಲಿ 8 ನೇ ರ‍್ಯಾಂಕ್ ಪಡೆದ ಹಿರಿಮೆ.ಯಶಸ್ವಿ ನ”ಗರಿ”ಹೆಗಲೇರಿದೆ. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿನಿ “ದಿಶಾ” ಅತ್ಯುತ್ತಮ ಓದಿನಲ್ಲಿ ಸಾಧನೆ ಮಾಡಿ.ರಾಜ್ಯ ಮಟ್ಟ ದಲ್ಲಿ 8ನೇ ರ‍್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ”ದಿಶಾ”,ಒಟ್ಟು 600 ಅಂಕಗಳಲ್ಲಿ 592 ಅಂಕಗಳನ್ನು ಪಡೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. 

ಶಿವಮೊಗ್ಗದ ಪ್ರಸಿದ್ಧ “ಪಿಇಎಸ್”ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿರುವ”ದಿಶಾ”ರವರು ವಿಷಯವಾರು ಅಂಕಗಳಲ್ಲೂ.!! ಅಗ್ರಸಾಧನೆ ತೋರಿದ್ದಾರೆ.ಹಿಂದಿಯಲ್ಲಿ 100/100, ಇಂಗ್ಲಿಷ್‌ ನಲ್ಲಿ 97, ಅರ್ಥಶಾಸ್ತ್ರದಲ್ಲಿ 96, ವ್ಯವಹಾರ ಅಧ್ಯಯನದಲ್ಲಿ 99,ಲೆಕ್ಕಶಾಸ್ತ್ರದಲ್ಲಿ 100 ಹಾಗೂ ಸಂಖ್ಯಾಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

ರಿಪ್ಪನ್ ಪೇಟೆಯ”ಶ್ಯಾಮ್ ಜ್ಯುವೆಲ್ಲರ್ಸ್”ಮಾಲೀಕ ಸುರೇಶ್ ಮತ್ತು ಸುನೀತಾ ದಂಪತಿಗಳ ಪುತ್ರಿಯಾಗಿರುವ “ದಿಶಾ,ತನ್ನ ಸಾಧನೆ ಯ.ಮೂಲಕ ಕುಟುಂಬ ಕ್ಕೂ.ಪಟ್ಟಣಕ್ಕೂ ಹೆಮ್ಮೆ ತಂದಿದ್ದಾರೆ.ಮೂಲತಃ ರಾಜಸ್ಥಾನ ಮೂಲದ ಈ ಕುಟುಂಬವು ಸುಮಾರು ವರ್ಷಗಳಿಂದ “ರಿಪ್ಪನ್ ಪೇಟೆಯಲ್ಲಿ”ನೆಲೆಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು ಅವರ ಕುಟುಂಬವು, “ದಿಶಾ”ರವರ ಸಾಧನೆ ಆ ಕುಟುಂಬದವರ ಪರಿಶ್ರಮಕ್ಕೆ ಫಲವಾಗಿ ಪರಿಣಮಿಸಿದೆ.

“ದಿಶಾ”ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ “ರಿಪ್ಪನ್ಪೇಟೆ”ಯ ರಾಮಕೃಷ್ಣ ವಿದ್ಯಾಲಯ ದಲ್ಲಿ ಪೂರ್ಣ ಗೊಳಿಸಿದ್ದಾರೆ. ಮಾತೃ ಭಾಷೆ “ರಾಜಸ್ಥಾನಿ”ಕನ್ನಡವೇ ಮನ ಕುಲದ ಶ್ರೇಷ್ಠ ಭಾಷೆಯೆಂದು ಸಾರಿದ್ದಾರೆ. ಇದೇ ರೀತಿಯಲ್ಲಿ ಎಲ್ಲಾ ವರ್ಗದ ವಿಧ್ಯಾ ರ್ಥಿಗಳು ಮಾದಕ/ದುಶ್ಚಟ/ವ್ಯಸನಗಳಿಗೆ ಬಲಿಯಾಗದೆ.ತಮ್ಮ ಉತ್ತಮ ಭವಿಷ್ಯ ವನ್ನು ಸಾಧನೆಯ ಹಾದಿಯಲ್ಲಿ ಮುಂದೆ ಸಾಗಿ ತಮ್ಮ ವಿಧ್ಯಾ-ಬುದ್ದಿಯನ್ನು ಉಜ್ವಲ ಗೊಳಿಸ ಬೇಕಾಗಿದೆ.ಸಂಪಾದಕರು.        🖊ಹೆಚ್ ಎಸ್ ವಿ🖊

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment