ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಅನಾದಿಕಾಲದಿಂದ ಬಂದ ವಾಮಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಗೃಹ/ಪೋಲಿಸ್ ಇಲಾಖೆ ದಕ್ಷ ಅಧಿಕಾರಿಗಳವರೇ.!?🖍

On: July 25, 2026 8:51 AM
Follow Us:
---Advertisement---

 

ದೂರು ಅರ್ಜಿ:-ವರದಿ:HSV   ಸಂಪಾದಕರು🖍

ಹುಂಚದ   ಹೊನ್ನೆಬೈಲು ವಾಟೆಕೂಡ್ಲು ಪ್ರದೇಶದಲ್ಲಿ ವಾಮಾಚಾರದ ಕೃತ್ಯ ಬೆಳಕಿಗೆ ಬಂದಿದೆ.🖊

ಗ್ರಾಮಸ್ಥರಲ್ಲಿ ಆತಂಕ, ಪೊಲೀಸರಿಗೆ ವಾಮಾ ಚಾರ ಮಾಡಿದವರ ಮೇಲೆ  ಕಾನೂನುಕ್ರಮಕ್ಕೆಓತ್ತಾಯ:

ಪೋಲಿಸರು ಮೊದಲಿಗೆ “ರೆಡ್ ಅಲಟ್೯ “ಅಗಿ ವಾಮಾಚಾರಿ ಗಳನ್ನು ಸೆದೆಬಡಿ ಯಲಿ….🖍

ಇತಂಹದೊಂದು ಪ್ರಕರಣ ಇತ್ತಿಚೆಗಷ್ಟೇ ಮೊನ್ನೆಯಷ್ಟೆ ಬೆಳಕಿಗೆ ಬಂದಿದೆ..!?

ಹೊಸನಗರ, ಜುಲೈ 24: ವಾಮಾಚಾರದ ಹೆಸರಿನಲ್ಲಿ ಜನರಲ್ಲಿ ಭಯದ ವಾತಾ ವರಣ ಸೃಷ್ಟಿಸುವ ಘಟನೆ  ಗಳು ಅನಾದಿ ಕಾಲದಿಂದ ಲೂ ಬಂದಿದ್ದರು.!?ಹಣ ಕಳೆದುಕೊಂಡು ಮೋಸ ಹೋದ ಹಲವಾರು ಪ್ರಕ ರಣಗಳು ಕೇಳಿ-ಹೇಳಿ ತಿಳಿದಿದ್ದರು ಕೂಡ.!ಜನರು ಮೂಡನಂಬಿಕೆಗಳಿಂದ ಹೊರಬಂದಿಲ್ಲಾ.!ಇಂತಹ ಅಧುನಿಕ ತಂತ್ರಜ್ಞಾನ ಕಾಲದ ಕಲಿಯುಗದಲ್ಲೂ ಕೂಡ ಪ್ರಜ್ಞಾವಂತ ನಾಗ ರೀಕರು ಸೇರಿದಂತೆ ವಾಮಾ ಚಾರ ಮಾಠಮಂತ್ರ ಇಂತ ಹುಗಳಿಗೆಮಾರು ಹೋಗುತ್ತಿ ರುವುದು ವಿರ್ಪಯಾಸ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ..!?🖍 

ಪೋಳ್ಳು-ಸುಳ್ಳು ಹೇಳಿ ವಾಮಾಚಾರದ ಹೆಸರಿನಲ್ಲಿ ಹಣ ಮಾಡುವ ಕಂತ್ರಿ ಬುಡು-ಬುಡುಕಿ ಭಂಡಾರ ರುದ್ರಾಕ್ಷೀ ಹಾರ ಕೋಲು ಮಾಂತ್ರಿಕರಿಂದ ಅದೇಷ್ಟು ಅಮಾಯಕ ಮುಗ್ದ ಜನರು ಮೋಸಹೋಗಿ ನಲುಗಿ ದ್ದಾರೋ ನಾ ಕಾಣೆ.!? ಮೂಡನಂಬಿಕೆಯ ನೆಟ್ಟು ತಮ್ಮ ಮನೆ-ಮಠ ಉದ್ದಾರ ಮಾಡುತ್ತೆವೆಂದು ಅಮಾ ಯಕರಿಂದ ಹಣಕಿತ್ತು ತಿನ್ನುವ ಅದೇಷ್ಟೋ ಬೇಕಾರ್”ಐನಾತಿ ಹರಾಮಿ ಕೋರ್ ಮಾಂತ್ರಿಕರು ವಾಮಾಚಾರಿ ಸೊಗಡಿನ “ಮುಖೇಡಿ”ಗಳು ನಮಗೆ ಅಲ್ಲಲ್ಲಿ ಕಾಣಸಿಗುತ್ತಾರೆ ಎಂದರು ಅಶ್ಚರ್ಯವಾಗ ಲಾರದು.!?

 ಸಮಾಜದಲ್ಲಿದೆ.ಇಂತಹ ಅನುಮಾನಾಸ್ಪದ ಕೃತ್ಯ ಗಳು ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಕೆಲವು ಭಾಗಗಳಲ್ಲಿಯೂ.ಅಲ್ಲಲ್ಲಿ ಕಂಡುಬರುತ್ತಿವೆ.!?ಎಂಬ ಆತಂಕದ ನಡುವೆ,ಇದೀಗ. ಹೊಸನಗರ ತಾಲ್ಲೂಕಿನ ಹುಂಚ ಗ್ರಾಮ ಪಂಚಾಯಿ ತಿ.ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ.ವಾಟೆಕೂಡ್ಲು ಪ್ರದೇಶದಲ್ಲಿ ವಾಮಾ ಚಾರದ ಹೊಗೆಯಾಡಿ ಕೃತ್ಯನಡೆದಿರುವುದು. ಬೆಳಕಿಗೆ ಬಂದಿದೆ.🖍

ಗ್ರಾಮದ ಶ್ರೀ ಶೇಖರಪ್ಪ ಬಿನ್ ಶಂಕ್ರಪ್ಪ ಹಾಗೂ ಶ್ರೀ ಶೇಖರ ಶೆಟ್ಟಿ ಬಿನ್ ಗಣಪ ಯ್ಯ ಶೆಟ್ಟಿ.ಅವರ ಮನೆಗ ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಕೆಲವು ವಸ್ತುಗಳನ್ನು ಇಟ್ಟು.!? ಅನುಮಾನಾಸ್ಪದ ರೀತಿಯ ಲ್ಲಿ.ಕೃತ್ಯ ಎಸಗಿರುವುದನ್ನು ಸ್ಥಳೀಯರು ಗಮನಿಸಿ    ದ್ದಾರೆ..🖍

ಗ್ರಾಮಸ್ಥರ ಮಾಹಿತಿ ಪ್ರಕಾರ, 2026ರ ಜುಲೈ 15ರಂದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬ ರು.ಈ ದೃಶ್ಯವನ್ನುಕಂಡು ಭಯಗೊಂಡು ಅಸ್ವಸ್ಥರಾಗಿ ದ್ದಾರೆ.ಎನ್ನಲಾಗಿದೆ.ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸುವುದ ರಿಂದ ಗ್ರಾಮದಲ್ಲಿ ಆತಂಕ ದ ವಾತಾವರಣ ನಿರ್ಮಾಣ ವಾಗಿದೆ.🖍

ಘಟನೆ ನಡೆದ ಬಳಿಕ ಹಲವು ದಿನಗಳು ಕಳೆದಿದ್ದ ರೂ,ಆ ರಸ್ತೆಯಲ್ಲಿ ಓಡಾಡ ಲು.ಗ್ರಾಮಸ್ಥರು ಹಿಂಜರಿ ಯುತ್ತಿದ್ದಾರೆ. ಪರಿಣಾಮ ವಾಗಿ.ಆ ಮಾರ್ಗದಲ್ಲಿ ಜನರ ಓಡಾಟವೂ ಕಡಿಮೆ ಯಾಗಿದ್ದು, ಮುಂದಿನ ದಿನಗಳಲ್ಲಿ.ಈ ಪ್ರದೇಶ ನಿರ್ಜನವಾಗುವ ಆತಂಕ ವ್ಯಕ್ತವಾಗುತ್ತಿದೆ.!

ಈ ಕುರಿತು ಕ್ರಮ ಕೈಗೊಳ್ಳು ವಂತೆ.ಪೋಲಿಸರಿಗೆ ಒತ್ತಾ ಯಿಸಿರುವ ಗ್ರಾಮಸ್ಥರು, ಕೃತ್ಯದ ಹಿಂದೆ ಇರುವವ ರನ್ನು ಪತ್ತೆಹಚ್ಚಿ.ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು.ಜೊತೆಗೆ ಸಾರ್ವಜನಿಕರಲ್ಲಿ ಭಯ ನಿವಾರಣೆಯಾಗುವಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಹೊಸನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.🖍

ಗ್ರಾಮಸ್ಥರು ನೀಡಿ ರುವ ದೂರು ಮತ್ತು ಹೇಳಿಕೆಗಳ ಆಧಾರಿತವಾಗಿದೆ.   ಈ ಕೃತ್ಯದ ಉದ್ದೇಶ ಅಥವಾ ಸ್ವರೂಪದಕುರಿತು ಪೊಲೀಸ್ ತನಿಖೆಯ ನಂತರವೇ ಅಧಿಕೃತ ಮಾಹಿತಿ ಹೊರಬಿದ್ದು ಸ್ಪಷ್ಟವಾಗಬೇಕಾಗಿದೆ.🖍

ನೇರ/ನಿಷ್ಟುರ/ದಕ್ಷತೆ/ಸತ್ಯ-ಸತ್ಯ ಶೋಧನೆಯ ವರದಿಗಾಗಿ ಮತ್ತು ಜಾಹಿರಾತುಗಾಗಿ ನಮ್ಮನ್ನು ಮತ್ತು (ತಾ)ವರದಿಗಾರರ ನ್ನು ಸಂಪರ್ಕಿಸಿ:- 6361103139      8073884934

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment